Thursday, July 12, 2007

ಮಾನವ ತಾನು ಕೆಡದಲ್ಲದೆ ಪ್ರಾಣಿಗಳನ್ನು ಕೆಡಿಸಿದ

ಕೆಲವು ವರ್ಷಗಳ ಹಿಂದೆ ನಾನು ನನ್ನ ಸ್ನೇಹಿತೆ ಬೆಂಗಳೂರಿನ ಜೆ.ಸಿ ರಸ್ತೇಲಿ ಹೊಗಬೆಕಾದ್ರೆ ಒಂದು ನಾಯಿ ರಸ್ತೆ ದಾಟೊದು ನೋಡಿ ತುಂಬಾ ಸಂತೊಷಪಟ್ಟಿದ್ವಿ. ರಸ್ತೆಲಿ ವಾಹನಗಳ ಸಂಚಾರ ನೋಡಿ ದಾಟಿತ್ತು. ಆದ್ರೆ ನಾವು ಮಾನವರು(So called civilized people) ವಾಹನ ಬರ್ತಾ ಇದ್ರೆ ಅದರಲ್ಲಿ ಬ್ರೆಕ್ ಇದೆ ಅಂತ ವಾಹನದ ಮುಂದೆ ಹೋಗಿ ನಿತ್ತು ಚಾಲಕನ ಚಾಣಕ್ಯ ಪರೀಕ್ಷೆ ಮಾಡ್ತೀವಿ.

ಈಗ ಪ್ರಾಣಿಗಳು ನಮ್ಮ ಬುದ್ದಿನ ಕಲ್ತಿವೆ(I guess they are also civilized now). ಮೊನ್ನೆ ಕಛೇರಿ ಇಂದ ಮನೆಗೆ ಹೋಗಬೇಕಾದ್ರೆ, ನಾಯಿ ನನ್ನ ಗಾಡಿ ಮುಂದೆ ಬಂದು ನನ್ಗೆ ಗಾಡಿ ಹಿಡಿತ ಪರೀಕ್ಷೆ ಮಾಡ್ತು. ನಿನ್ನೆ ಎತ್ತು ನಾನೆನು ಕಡಿಮೆ ಅಂತ ನನ್ನ ಪರೀಕ್ಷೆ ಮಾಡ್ತು. ನಾನು ಪಾಸಗಿದೀನಿ, ಯಾಕಂದ್ರೆ ನನ್ನ ಗಾಡಿ ಸರಿ ಇದೆ, ನಾಯಿ, ಎತ್ತು ಕೊಡ ಜೀವನ ಮಾಡ್ತಾ ಇವೆ.

ನಾನು ನನ್ನ ಹಾಗೆ ವಾಹನ ಚಲಾಯಿಸುವವರು ದಿನಾ ರಸ್ತೆಲಿ ಪರೀಕ್ಷೆ ಬರಿತೀವಿ. ನಮ್ಮನ್ನು ಪರೀಕ್ಷಿಸುವವರು ಮಾನವರು,ಜಾನವರು. ಪರೀಕ್ಷೆಯಲ್ಲಿ ಕೆಲವರು ನಪಾಸ್ ಆದ್ರೆ ಕೆಲವರು ಪಾಸ್.

No comments: